ಹಾಸ್ಯಪ್ರಿಯರಿಗೆ ?ಡಬ್ಬಲ್ ಧಮಕಾ
Posted date: 10/May/2010

ಇತ್ತೀಚೆಗೆ ಹಾಸ್ಯಪ್ರಧಾನ ಚಿತ್ರಗಳನ್ನು ಕನ್ನಡ ಚಿತ್ರರಸಿಕರು ಹೆಚ್ಚಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಪರಿಶುದ್ಧ ಮನೋರಂಜನೆ ಅಪೇಕ್ಷಿಸುವ ಪ್ರೇಕ್ಷಕರಿಗಾಗಿ ‘ಡಬ್ಬಲ್ ಧಮಕಾ ಚಿತ್ರ ಆರಂಭವಾಗಿದೆ. ಒನ್ ಗೆಟ್ ಒನ್ ಫ಼್ರೀ ಎಂಬ ಅಡಿಬರಹ ಹೊಂದಿರುವ ಈ ಚಿತ್ರದ ಚಿತ್ರೀಕರಣಕ್ಕೆ  ಕಳೆದ ವಾರ ಹೈದರಾಬಾದ್‌ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆದ ಸರಳ ಮುಹೂರ್ತ ಸಮಾರಂಭದಲ್ಲಿ ಚಾಲನೆ ನೀಡಲಾಯಿತು.
        ಭಗವತಿ ಫ಼ಿಲಂಸ್‌ನ ಚೊಚ್ಚಲ ಕಾಣಿಕೆಯಾದ ಈ ಚಿತ್ರವನ್ನು ಕುಮಾರಿ ರೋಹಿಣಿ ನಿರ್ಮಿಸುತ್ತಿದ್ದಾರೆ. ಸತ್ಯ ವಾರಣಾಸಿ ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಕನ್ನಡ, ತಮಿಳು ಹಾಗೂ ತೆಲಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಸಾಯಿಕಾರ್ತಿಕ್ ಸಂಗೀತ ಸಂಯೋಜಿಸುತ್ತಿದ್ದಾರೆ.
       ಬೆಂಗಳೂರು, ಹೈದರಾಬಾದ್ ಹಾಗೂ ಕೊಡೈಕೆನಾಲ್‌ನಲ್ಲಿ ಚಿತ್ರಕ್ಕೆ ೪೫ದಿನಗಳ ಚಿತ್ರೀಕರಣ ನಡೆಯಲಿದೆ. ಬಾಬಿ ಛಾಯಾಗ್ರಹಣ, ವಿಜಯಕುಮಾರ್ ನಿರ್ಮಾಣನಿರ್ವಹಣೆ ಹಾಗೂ ಮಧು ಅವರ ಸಂಕಲನವಿರುವ ‘ಡಬ್ಬಲ್ ಧಮಕಾ ಚಿತ್ರದ ನಾಯಕರಾಗಿ ವಿಜಯ್ ಮತ್ತು ಶ್ರೀನಿವಾಸ್ ಅಭಿನಯಿಸುತ್ತಿದ್ದಾರೆ, ಮುಂಬೈ ಮೂಲದ ಕರಿನಾ ಷಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತೆಲಗಿನ ಖ್ಯಾತ ನಿರ್ದೇಶಕ ಇ.ವಿ.ವಿ ಸತ್ಯನಾರಾಯಣ ಅವರ ಪುತ್ರ ಅಲ್ಲರಿ ನರೇಶ್ ಅತಿಥಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed